ಐಹೊಳೆ Aihole :
Table of Contents
ಐಹೊಳೆಯು Aihole ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆ ಯಲ್ಲಿದೆ. ಐಹೊಳೆಯು ಆಗಿನ ಚಾಲುಕ್ಯರ ರಾಜಧಾನಿ ಆಗಿತ್ತು. ಇತರ ಆಡಳಿತಕ್ಕೆ ಬಂದ ಎರಡನೇ ಪುಲಿಕೇಶಿ ತನ್ನ ರಾಜಧಾನಿಯನ್ನು ಬದಲಾಯಿಸಿದರು ಆದರೂ ಐಹೊಳೆಯು ಪ್ರಮುಖ ಕೇಂದ್ರವಾಗಿತ್ತು. ಇಲ್ಲಿರುವ ದೇವಾಲಯಗಳು ಮತ್ತು ದೇವಾಲಯಗಳಲ್ಲಿರುವ ವಾಸ್ತುಶಿಲ್ಪಗಳು ಪ್ರಸಿದ್ಧವಾಗಿದೆ. ಇದು ಅತ್ಯಂತ ಪ್ರಾಚೀನ ಗ್ರಾಮಗಳಲ್ಲಿ ಒಂದಾಗಿದೆ.
Aihole history in Kannada :
ಆಗಿನ ಚಾಲುಕ್ಯರ ಅವಧಿಯಲ್ಲಿ ಇದು ವಿದ್ಯಾಕೇಂದ್ರ ಕೂಡ ಆಗಿತ್ತು ಹಲವು ಶಾಸನಗಳಲ್ಲಿ ಐಹೊಳೆ ಅನ್ನು ಆರ್ಯಪುರ ಎಂದು ಉಲ್ಲೇಖ ಮಾಡಲಾಗಿದೆ. ನಂತರ ಇದು ಐಹೊಳೆ ಆಯಿತೆದು ನಂಬಲಾಗಿದೆ. ಐಹೊಳೆಯನ್ನು ಭಾರತದ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯುತ್ತಾರೆ ಇಲ್ಲಿ ಕ್ರಿಸ್ತಪೂರ್ವ 6ನೇ ಶತಮಾನದ ಮುಂಚಿನಿಂದಲೂ ಇಲ್ಲಿ ಜನವಸತಿ ಇದ್ದು ಎಂದು ಸಂಶೋಧಕರು ಹೇಳುತ್ತಾರೆ.
ಧರ್ಮಸ್ಥಳದ ಸಂಪೂರ್ಣ ಮಾಹಿತಿ ಕನ್ನಡದಲ್ಲಿ | Dharmasthala Manjunatha Temple
ಐಹೊಳೆಯು temples :
ಐಹೊಳೆಯಲ್ಲಿ ನೀವು ವಿಶ್ವಪ್ರಸಿದ್ಧಿಯನ್ನು ಇರುವ ಹಲವಾರು ದೇವಾಲಯಗಳನ್ನು ಕಾಣಬಹುದು. ಇಲ್ಲಿ 120 ದೇವಾಲಯಗಳು ಹಾಗೂ 4 ಗುಹಾಲಯಗಳನ್ನು ನೋಡಬಹುದು. ಇಲ್ಲಿರುವ ಪ್ರತಿಯೊಂದು ದೇವಾಲಯಗಳು ಒಂದಕ್ಕಿಂತ ಒಂದು ವಿಭಿನ್ನ ವಾಸ್ತುಶಿಲ್ಪವನ್ನು ಹೊಂದಿದೆ. ಹಾಗಾಗಿ ಇದು ಎಲ್ಲರಿಗೂ ಆಕರ್ಷಣೀಯವಾಗಿದೆ ಕೆಂಪು ಮರಳು ಇಂದ ಕಟ್ಟಿದ್ದರಿಂದ ಹಲವಾರು ದೇವಾಲಯಗಳು ಈಗಾಗಲೇ ನಾಶವಾಗಿದೆ. ಇಲ್ಲಿ ಪ್ರವಾಸಿಗರು ಕೂಡ ಈ ಶಿಲೆಗಳನ್ನು ಮುಟ್ಟುವುದರಿಂದ ಹಲವು ಹಾಳಾಗಿವೆ.
ಇಲ್ಲಿರುವ ದೇವಾಲಯಗಳಲ್ಲಿ ದುರ್ಗ ದೇವಾಲಯವು ತುಂಬಾ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ವಿಕ್ರಮಾದಿತ್ಯನ ಹಳಿಯ ಕುಮಾರ ಸಿಂಗ ಎಂಬುದನ್ನು ಕಟ್ಟಿಸಿದನು. ವಾಸ್ತುಶಿಲ್ಪ ದೃಷ್ಟಿಯಿಂದ ನೋಡಿದರೆ ಇದೊಂದು ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದಾಗಿದೆ ಈ ದೇವಾಲಯ ಒಟ್ಟು 84 ಅಡಿ ಉದ್ದ ಮತ್ತು 32 ಆಗಲ್ಲ ಹೊಂದಿದೆ.
ಮೇಗುಟ್ಟಿ ದೇವಾಲಯ :
ಕ್ರಿಸ್ತಶಕ 634 ರಲ್ಲಿ ಎರಡನೇ ಪುಲಕೇಶಿಯ ಅವಧಿಯಲ್ಲಿ ಆಶ್ರಯದಲ್ಲಿದ್ದ ರವಿ ಕೀರ್ತಿಯು ಮೇಗುಟ್ಟಿ ಎಂಬ ದೇವಾಲಯವನ್ನು ನಿರ್ಮಾಣ ಮಾಡುತ್ತಾನೆ. ತುಂಬಾ ಎತ್ತರದಲ್ಲಿ ಈ ದೇವಾಲಯ ಇರುವುದರಿಂದ ಈ ಹೆಸರು ಬಂತು ಎಂದು ಹೇಳಲಾಗುತ್ತೆ. ಅತ್ಯಂತ ಎತ್ತರದ ಬೆಟ್ಟದಲ್ಲಿದೆ.ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.https://www.worldhistory.org/Aihole/