Dharmasthala Manjunatha Temple – ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನವು ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯದ ಇತಿಹಾಸವು 800 ವರ್ಷಗಳ ಹಿಂದಿನದು ಆಗಿರುತ್ತದೆ. ಈ ದೇವಾಲಯದಲ್ಲಿ ಹಿಂದೂ ದೇವರಾದ ಶಿವನಿಗೆ ಪೂಜೆಯನ್ನು ಮಾಡುತ್ತಾರೆ. ಈ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಎಂಬಲ್ಲಿ ಇದೆ.
ಕೇರಳ ದೇವಾಲಯದ ವಾಸ್ತುಶಿಲ್ಪದ ರೀತಿಯಲ್ಲಿ ಶ್ರೀ ಮಂಜುನಾಥ ದೇವಾಲಯವನ್ನು Dharmasthala Manjunatha Temple ಕಟ್ಟಲಾಗಿದೆ. ಕೇರಳ ದೇವಾಲಯಗಳ ವಾಸ್ತುಶಿಲ್ಪವು ಭಾರತದ ದೇವಾಲಯದ ವಾಸ್ತು ಶಿಲ್ಪ ಗಳಿಂತ ಸ್ವಲ್ಪ ಬೆರೆನೆ ಇರುತ್ತದೆ. ಶ್ರೀ ಮಂಜುನಾಥ ದೇವಾಲಯದ ವಾಸ್ತುಶಿಲ್ಪವು ಮರ, ಕಲ್ಲು ಮತ್ತು ಲೋಹಗಳ ಹೊಂದಿದೆ.
Sri Dharmasthala Manjunatha Temple History in Kannada : ಧರ್ಮಸ್ಥಳದ ಹಿಸ್ಟರಿ
Table of Contents
800 ವರ್ಷಗಳ ಮುಂಚೆ ಮಲ್ಲರ್ಮಡಿ ಹಳ್ಳಿ ಅಲ್ಲಿ ಧರ್ಮಸ್ಥಳವನ್ನು ಕುಡುಮಾ ಎಂದು ಹೆಸರಿತ್ತು. ಬಿರ್ಮಣ್ಣ ಪೆರ್ಗಡೆ ಮತ್ತು ಅವರ ಪತ್ನಿ ಅಮ್ಮು ಬಲ್ಲಲ್ತಿ ಅವ್ರು ನೆಲ್ಯಾಡಿ ಎಂಬ ಸ್ಥಳದಲ್ಲಿ ವಾಸ ಆಗಿದ್ದರು. ಸರಳ, ಧರ್ಮನಿಷ್ಠ ಮತ್ತು ಪ್ರೀತಿಯ ಜನರು ಇವರು ಆಗಿದ್ದರಿ. ಈ ಕುಟುಂಬವು ದಾನ ಧರ್ಮ ಎಲ್ಲರಿಗೂ ಪ್ರೀತಿ ಪಾತ್ರ ಆಗಿದ್ದ ಕುಟುಂಬ ಆಗಿತ್ತು.
Dharmasthala Manjunatha Temple – ಧರ್ಮದ ರಕ್ಷಕ ದೇವದೂತರು ಮನುಷ್ಯರ ರೂಪವನ್ನು ಪಡೆದುಕೊಂಡು ಪೆರ್ಗಡೆ ಮನೆಗೆ ಬಂದರು ಎಂದು ಹಳೆಯ ಪುರಾಣಗಳು ಹೇಳುತ್ತವೆ. ಎಂದಿನಂತೆ, ಪೆರ್ಗಡೆ ದಂಪತಿಗಳು ಈ ದೇವತೂತ ಮಾನವರನ್ನು ಪ್ರೀತಿಯಿಂದ ಗೌರವದಿಂದ ಸ್ವಾಗತಿಸಿದರು. ಆನಂತರ ಬಿರ್ಮಣ್ಣ ಪೆರ್ಗಡೆ ಅವರ ಕನಸಿನಲ್ಲಿ ಈ ದೇವದೂತ ಮಾನವರು ಕಾಣಿಸಿದರು ಮತ್ತು ಅವರು ಇವರ ಮನೆಗೆ ಯಾಕೆ ಬಂದರು ಬಂದ ಉದ್ದೇಶ ಎಂದು ಎಂದು ಹೇಳಿದರು ಅಂತೆ. ದೈವಗಳನ್ನು ಪೂಜಿಸಬೇಕು ಮತ್ತು ಧರ್ಮವನ್ನು ಹರಡಲು ತಮ್ಮ ಜೀವನವನ್ನು ಅರ್ಪಿಸಬೇಕು ಎಂದು ಹೇಳಿದರು. ಆದ್ದರಿಂದ ಈ ಕುಟುಂಬವು ತಮ್ಮ ಮನೆಯಲ್ಲಿ ಈ ದೈವಗಳನ್ನು ಪೂಜೆ ಮಾಡಲು ಪ್ರಾರಭಾ ಮಾಡಿದರು.
ಇವರು ದೇವಾಲಯವನ್ನು ನಿರ್ಮಿಸಿ ಬ್ರಾಹ್ಮಣ ಪುರೋಹಿತರನ್ನು ಪೂಜೆ ಮಾಡಲಾ ಆಹ್ವಾನ ಮಾಡಿದರು. ಈ ಪುರೋಹಿತರು ಪೆರ್ಗಡೆ ಕುಟುಂಬದ ಬಳಿ ದೈವಗಳ ಪಕ್ಕದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಹೇಳಿದರು ಇಡರಂತೆಯೇ ದೈವಗಳು ಮಂಗಳೂರಿನ ಕದ್ರಿಯಿಂದ ಶ್ರೀ ಮಂಜುನಾಥೇಶ್ವರ ವಿಗ್ರಹವನ್ನು ಇಲ್ಲಿಗೆ ತರಲು ಅನ್ನಪ್ಪ ಸ್ವಾಮಿಯನ್ನು ಕಳುಹಿಸಿದರು. ನಂತರ ಇದನ್ನು ಧರ್ಮಸ್ಥಳ ದಲ್ಲಿ ಇಡಲಾಯಿತು.
ವಿರೂಪಾಕ್ಷ ದೇವಾಲಯದ ಅದ್ಭುತ ಸಂಗತಿಗಳು | virupaksha temple in kannada
16 ನೇ ಶತಮಾನದಲ್ಲಿ ಶ್ರೀ ದೇವರಾಜ ಹೆಗ್ಗಡೆ ಅವರು ಶ್ರೀ ವಾಡಿರಾಜ ಸ್ವಾಮಿಯನ್ನು ಇಲ್ಲಿಗೆ ಬರಲು ಆಹ್ವಾನ ಮಾಡಿದರು. ಆದರೆ ವಾಡಿರಾಜ ಸ್ವಾಮಿಜಿ ಆಹಾರ ಸ್ವೀಕರಿಸಲು ನಿರಾಕರಿಸಿದರು ಏಕೆಂದರೆ ಶ್ರೀ ಮಂಜುನಾಥ ದೇವರ ವಿಗ್ರಹವನ್ನು ವೈದಿಕ ವಿಧಿಗಳ ಪ್ರಕಾರ ಪವಿತ್ರ ಮಾಡಿಲ್ಲ ಎಂದು. ಶ್ರೀ ದೇವರಾಜ ಹೆಗ್ಗಡೆ ಕುಟುಂಬ ಸ್ವಾಮಿಜಿಯನ್ನು ಮಂಜುನಾಥ ಲಿಂಗವನ್ನು ಪುನಃ ಪವಿತ್ರ ಮಾಡುವಂತೆ ಹೇಳಿದರು. ದಾನದಿಂದ ತ್ರಿಪ್ತಿ ಹೊಂದಿದ ಸ್ವಾಮೀಜಿ ಈ ಸ್ಥಳವನ್ನು ಧರ್ಮಸ್ಥಳ ಎಂದು ಕರೆದರು. ಧರ್ಮಸ್ಥಳ ಎಂದರೆ ಧರ್ಮ ಮತ್ತು ದಾನಧರ್ಮದ ಸ್ಥಳ ಎಂದು ಅರ್ಥ. ಆದ್ದರಿಂದ, 800 ವರ್ಷಗಳ ಹಿಂದೆ ಪ್ರಾರಭಾ ಮಾಡಿದ ಈ ಕುಟಂಬ ತನ್ನ 21 ತಲೆಮಾರು ಈಗಲೂ ದಾನ ಧರ್ಮವನ್ನು ಮಾಡುತ್ತಲೇ ಇದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯ ನಡೆಯುವ ಸೇವೆಗಳು : Dharmasthala Manjunatha Temple
- ಶತಾ ರುದ್ರಭಿಷೇಕ
- ಶ್ರೀ ಪ್ರಸಾದ ತೀರ್ಥ
- ಬಿಲ್ವಾ ಪತ್ರಾರ್ಚನ
- ಕರ್ಪೂರ ಆರತಿ
- ರುದ್ರಭಿಷೇಕ ಬ್ರಹ್ಮದಾಯ, ಬ್ರಹ್ಮರ್ಪಣದೊಂದಿಗೆ ಪಂಚಮೃತಭಿಷೇಕ
ಶ್ರೀ ಗಣಪತಿ ಸ್ವಾಮಿಗೆ ನಡೆಯುವ ಸೇವೆಗಳು:
- ಪಂಚಮೃತಭಿಷೇಕ
- ಅಪ್ಪ ನೈವೇದ್ಯ
- ಪಂಚ ಕಜ್ಜಯ
- ಕರ್ಪೂರ ಆರತಿ
ಶ್ರೀ ಅನ್ನಪ್ಪ ಸ್ವಾಮಿಗೆ ನಡೆಯುವ ಸೇವೆಗಳು :
- ಬೆಲ್ಲ ನೈವೇದ್ಯ
- ಕರ್ಪುರ ಆರತಿ
ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯ ದರ್ಶನದ ಸಮಯ: Sri Dharmasthala Manjunatha Temple Darshana Timings:
ನೀವು ಬೆಳಿಗ್ಗೆ 6:30 ರಿಂದ 11:00 ರವರೆಗೆ, ಮಧ್ಯಾಹ್ನ 12:15 PM ರಿಂದ 2:30 PM ವರೆಗೆ ಮತ್ತು ಸಂಜೆ 5-00 PM ರಿಂದ 8-30 PM ಮಂಜುನಾಥ ದೇವರ ದರ್ಶನವನ್ನು ಮಾಡಬಹುದು. ಉಳಿದ ಸಮಯದಲ್ಲಿ ದರ್ಶನ ಮಾಡಲು ಅನುಮತಿ ಇರುವುದಿಲ್ಲ ನೆನಪಿನ್ನಲ್ಲಿಡಿ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿ. https://www.shridharmasthala.org/history/
ಭೇಟಿ ನೀಡಬೇಕಾದ ಸ್ಥಳಗಳು ಇಲ್ಲಿವೆ
ಶ್ರೀ ಮಂಜುನಾಥ ಸ್ವಾಮಿಯ ದೇವಾಲಯ, ಶ್ರೀ ಅಮ್ಮನವರ ದೇವಾಲಯ, ಶ್ರೀ ಅನ್ನಪ್ಪ ಸ್ವಾಮಿಯ ದೇವಾಲಯ, ಶ್ರೀ ಗಣಪತಿ ದೇವಾಲಯ,ನೆಲ್ಯಾಡಿ ಬೀಡು, ಶ್ರೀ ಬಾಹುಬಲಿ ಗೊಮ್ಮಟ, ಅನ್ನಪೂರ್ಣ ಛತ್ರ, ಮಂಜುಷಾ ಮ್ಯೂಸಿಯಂ
ಮಂಜುಷಾ ಕಾರ್ ಮ್ಯೂಸಿಯಂ ಮುಂತಾದವು ಆಗಿವೆ.