information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ

ತಾಲೂಕುಗಳು ಭಟ್ಕಳ
ಹೊನ್ನಾವರ
ಅಂಕೋಲ
ಕಾರವಾರ
ಸಿದ್ದಾಪುರ
ಸಿರ್ಸಿ
ಯಲ್ಲಾಪುರ
ದಾಂಡೇಲಿ
ಮುಂಡಗೋಡು
ಜೊಯಿಡಾ
ಹಳಿಯಾಳ
Area ( ಶ್ರೇಣಿ) 10,291 km2
ಭಾಷೆ ಕನ್ನಡ
Literacy 84.03 %
ಸ್ಥಾಪನಾ ದಿನ 1 nov 1956

information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ

Table of Contents

information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ ಇಂದಿನ ಲೇಖನದಲ್ಲಿ ನಾವು ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ಕೊನೆಯವರೆಗೆ ಈ ಲೇಖನವನ್ನು ಓದಿ. ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಬರುತ್ತದೆ. ಉತ್ತರ ಕನ್ನಡವು ತನ್ನ ಗಡಿಯನ್ನು ಗೋವಾ ರಾಜ್ಯ ಬೆಳಗಾವಿ ಧಾರವಾಡ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳೊಂದಿಗೆ ಹಂಚಿಕೊಳ್ಳುತ್ತದೆ. ಇದರ ಪಶ್ಚಿಮಕ್ಕೆ ಅರಬ್ಬಿ ಸಮುದ್ರದಿಂದ ಕೂಡಿದೆ. ಉತ್ತರ ಕನ್ನಡ ಜಿಲ್ಲೆಯು ಬಹುತೇಕವಾಗಿ ತನ್ನ ಪ್ರಕೃತಿ ಸೌಂದರ್ಯದಿಂದ ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆ ಆಗಿರುತ್ತದೆ.

about uttara kannada ಇಲ್ಲಿ ನಾವು ಅನೇಕ ಸುಂದರವಾದ ಜಲಪಾತಗಳನ್ನು ಕಾಣಬಹುದಾಗಿದೆ. ಉತ್ತರ ಕನ್ನಡದಲ್ಲಿ ನಾವು ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಹೆಸರುಗಳನ್ನು ಮಾಡಿದೆ. ಉತ್ತರ ಕನ್ನಡ ಜಿಲ್ಲೆಯು ಸ್ವಾತಂತ್ರ ಸಂಗ್ರಾಮದಲ್ಲಿಯೂ ಸ್ಥಾನಮಾನವನ್ನು ಪಡೆದಿದೆ. ಉತ್ತರ ಕನ್ನಡದ ಒಟ್ಟು ಜನಸಂಖ್ಯೆಯು 2011ರ ಜನಗಣತಿಯ ಪ್ರಕಾರ 18,23,169 ಜನಸಂಖ್ಯೆ ಆಗಿದೆ. ಇದರಲ್ಲಿ ಪುರುಷರ ಸಂಖ್ಯೆಯು 9,26,256 ಮತ್ತು ಮಹಿಳೆಯರ ಸಂಖ್ಯೆಯು 7,10,713 ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ಇತಿಹಾಸ : History of uttara Kannada 

History of uttara kannada ಇನ್ನು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದ ಬಗ್ಗೆ ನೋಡಿದರೆ ಇಲ್ಲಿ ಇತಿಹಾಸವು ಮೌರ್ಯರ ಕಾಲದಿಂದ ಆರಂಭವಾಗುತ್ತದೆ. ಈ ಪ್ರದೇಶಗಳು ಮೌರ್ಯ ಸಾಮ್ರಾಜ್ಯ ದಲ್ಲಿದ್ದು. ಇಲ್ಲಿನ ಬನವಾಸಿಯು ಮೌರ್ಯ ಸಾಮ್ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಒಂದಾಗಿತ್ತು. ದೀಪಾವಂಶ ಮೊದಲಾದ ಧರ್ಮ ಗ್ರಂಥಗಳಲ್ಲಿ ನಾವು ತಿಳಿಯುವುದೇನೆಂದರೆ ಇಲ್ಲಿಗೆ ಹಲವಾರು ಬೌದ್ಧ ಬಿಕ್ಷುಕರನ್ನು ಧರ್ಮ ಪ್ರಸಾರಕ್ಕಾಗಿ ಅಶೋಕ ಕಳುಹಿಸಿದ್ದಾನೆ ಎಂದು ಇವುಗಳಲ್ಲಿ ನಾವು ತಿಳಿಯಬಹುದು. ನಂತರದ ದಿನಗಳಲ್ಲಿ ಎರಡನೇ ಮತ್ತು ಮೂರನೇ ಶತಮಾನದ ನಡುವೆ ಈ ಪ್ರದೇಶವನ್ನು ಸಾರ್ಥವಾನರ ಸಂಬಂಧಿಕರಾದ ಚಟುಕುಳ್ಳ ದವರು ಇಲ್ಲಿ ಆಳ್ವಿಕೆಯನ್ನು ಮಾಡುತ್ತಿದ್ದರು. ಇದು ಸುಮಾರು 4 ರಿಂದ 6ನೇ ಶತಮಾನದವರೆಗೂ ಈ ಪ್ರದೇಶವನ್ನು ಕದಂಬರು ಆಳ್ವಿಕೆ ಮಾಡುತ್ತಿದ್ದರು. ಕದಂಬರ ಆಳ್ವಿಕೆಯ ಅನಂತರ ಈ ಪ್ರದೇಶವನ್ನು ಆರರಿಂದ ಎಂಟನೇ ಶತಮಾನದವರೆಗೆ ಬಾದಾಮಿಯ ಚಾಲುಕ್ಯರು ಮತ್ತು ನಂತರ ಎಂಟನೇ ಶತಮಾನದಿಂದ 10ನೇ ಶತಮಾನದ ವರೆಗೆ ರಾಷ್ಟ್ರಕೂಟರು ಪ್ರದೇಶವನ್ನು ಆಳ್ವಿಕೆ ಮಾಡಿದರು.

information about uttara kannada ಚಾಲುಕ್ಯರ ಕಾಲದಲ್ಲಿ ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಈ ಎಲ್ಲಾ ಪ್ರದೇಶಗಳು ಬಹುತೇಕ ಬನವಾಸಿ ಎಂಬ ಪ್ರಮುಖ ಪ್ರಾಂತ್ಯದ ಪ್ರದೇಶವಾಗಿತ್ತು. ನಂತರ ಗೋವೆಯ ಕದಂಬರು 6 ನೆ ಶತಮಾನದಿಂದ 13ನೇ ಶತಮಾನದವರೆಗೆ ಈ ಪ್ರದೇಶವನ್ನು ಹೆಚ್ಚಿಗೆ ಆಳುತ್ತಿದ್ದರು ನಂತರ ಸುಮಾರು 16ನೆಯ ಶತಮಾನದ ಹೊರಗೆ ಪ್ರದೇಶವನ್ನು ವಿಜಯನಗರ ಸಾಮ್ರಾಜ್ಯವು ಆಳ್ವಿಕೆ ನಡೆಸಿತ್ತು. ನಂತರದ ದಿನಗಳಲ್ಲಿ 17ನೇ ಶತಮಾನದಿಂದ 18ನೇ ಶತಮಾನದವರೆಗೆ ಸ್ವಾದಿ ಗೇರುಸೊಪ್ಪ ಕೆಳದಿಯ ನಾಯಕರು ಸ್ವಾದಿ ಮುಂತಾದ ಅರಸರುಗಳು ಈ ಪ್ರದೇಶವನ್ನು ಆಳ್ವಿಕೆ ನಡೆಸುತ್ತಿದ್ದರು. ಈ ಪ್ರದೇಶವನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನ ಕೂಡ ಆಳ್ವಿಕೆ ಮಾಡಿರುತ್ತಾರೆ 18ನೇ ಶತಮಾನದ ಉತ್ತರಾರ್ಧದಲ್ಲಿ.

about uttarakhand in kannada

about uttarakhand in kannada ನಂತರದ ದಿನಗಳಲ್ಲಿ ನಾಲ್ಕನೇ ಮೈಸೂರು ಯುದ್ಧದಲ್ಲಿ ಶ್ರೀರಂಗಪಟ್ಟಣ ಪತನ ಆದ ನಂತರ ಈ ಪ್ರದೇಶವನ್ನು 1799 ರ ಜುಲೈ 8ರಂದು ಬ್ರಿಟಿಷ್ ಕಂಪನಿಯಾದ ಈಸ್ಟ್ ಇಂಡಿಯಾ ಕಂಪನಿ ಈ ಪ್ರದೇಶದಲ್ಲಿ ತನ್ನ ಹಿಡಿತವನ್ನು ಸಾಧಿಸಿದ್ದು.information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ ಇದು ಸುಮಾರಿಗೆ ಕಾರವಾರ ಮತ್ತು ದಕ್ಷಿಣದಲ್ಲಿ ಇದು ಕಾಸರಗೋಡು ಜಿಲ್ಲೆಗಳ ನಡುವೆ ಪ್ರದೇಶಗಳನ್ನು ವಶ ಮಾಡಿಕೊಂಡು ನಂತರ ಈ ಪ್ರದೇಶಕ್ಕೆ ಕೆನರಾ ಜಿಲ್ಲೆ ಎಂದು ಮರುನಾಮಕರಣ ಮಾಡಿದರು. ಅವತ್ತು ವಶ ಮಾಡಿದ್ದ ನಂತರ 1957 ರ ವರೆಗೂ ಈ ಕೆನರಾ ಪ್ರದೇಶವನ್ನು ಈಸ್ಟ್ ಇಂಡಿಯಾ ಕಂಪನಿ ಆಡಳಿತ ನಡೆಸುತ್ತಿತ್ತು. ಕೆನರಾ ಜಿಲ್ಲೆಯಲ್ಲಿ ಸಿಪಾಯಿ ದಂಗೆ ನಡೆದ ಪರಿಣಾಮವಾಗಿ ಈ ಪ್ರದೇಶಗಳು ನೇರವಾಗಿ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿತು.

about uttara kannada ಈ ಪ್ರದೇಶ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ನಂತರ ಈ ಜಿಲ್ಲೆಯನ್ನು ಎರಡು ಜಿಲ್ಲೆಯನ್ನಾಗಿ ವಿಭಾಗ ಮಾಡಿ ನಾರ್ತ್ ಕೆನರಾ ಮತ್ತು ಸೌತ್ ಕೆನರಾ ಎಂಬ ಹೆಸರನ್ನು ಇಡಲಾಯಿತು. ಸೌತ್ ಕೆನಾರವನ್ನು ಮದ್ರಾಸ್ ಪ್ರಾಂತ್ಯಕ್ಕೆ ಮತ್ತು ನಾರ್ತ್ ಕೆನರಾವನ್ನು ಮುಂಬೈ ಪ್ರಾಂತ್ಯಕ್ಕೆ ಬ್ರಿಟಿಷರು ಸೇರಿಸಿದರು. ಆನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತನಂತರ ದೇಶದಲ್ಲಿ ಆದ ರಾಜ್ಯಗಳ ರಚನೆಯ ವೇಳೆ ಈ ಪ್ರದೇಶವನ್ನು ಅಂದಿನ ಮೈಸೂರು ರಾಜ್ಯಕ್ಕೆ ಅಂದರೆ ಇಂದಿನ ಕರ್ನಾಟಕ ರಾಜ್ಯಕ್ಕೆ ಸೇರಿಸಲಾಯಿತು.

ಭೌಗೋಳಿಕ ಮಾಹಿತಿ : Giography of uttara kannada – ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು

ಉತ್ತರ ಕನ್ನಡ ಜಿಲ್ಲೆಯನ್ನು ನಾವು ಎರಡು ಭೌಗೋಳಿಕ ಭಾಗಗಳಾಗಿ ವಿಂಗಡಣೆ ಮಾಡಬಹುದು. ಮೊದಲನೆಯದಾಗಿ ಹತ್ತರಿಂದ ಹದಿನೈದು ಕಿಲೋಮೀಟರ್ ಹಗಲ ಇರುವ ಈ ಪ್ರದೇಶವನ್ನು ಕರಾವಳಿ ಗಟ್ಟ ಪ್ರದೇಶ ಎಂದು ಮತ್ತು ಪೂರ್ವ ದಿಕ್ಕಿಗೆ ಇರುವ ಬೃಹತ್ ಕಾಡುಗಳನ್ನು ಸಹ್ಯಾದ್ರಿ ಶ್ರೇಣಿ ಎಂದು ಕರೆಯುತ್ತೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು : ಈ ಬೆಟ್ಟದಿಂದ ಹಲವಾರು ನದಿಗಳು ಹರಿಯುತ್ತವೆ. ಅವುಗಳಲ್ಲಿ ಪ್ರಮುಖ ಎಂದರೆ ಕಾಳಿ ಗಂಗಾವಳಿ ಶರಾವತ್ತಿ ನದಿಗಳು ಆಗಿದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ನದಿಯು ಹರಿಯುತ್ತದೆ.about uttara kannada ಗೇರುಸೊಪ್ಪೆ ಪ್ರದೇಶದಲ್ಲಿ ನಾವು ಸುಂದರವಾದ ಇಡೀ ಜಗತ್ತಿನಲ್ಲಿ ಪ್ರಸಿದ್ಧವಾಗಿರುವ ಜೋಗ್ ಜಲಪಾತವನ್ನು ನಾವು ನೋಡಬಹುದು. ಇದರ ಜೊತೆಗೆ ಉಂಚಳ್ಳಿ ಮಾಗೋಡು ಲಾಲಗುಳಿ ಶಿವಗಂಗಾ ಮುಂತಾದ ಇತರ ಜಲಪಾತಗಳನ್ನು ಕೂಡ ನಾವು ಇಲ್ಲಿ ಕಾಣಬಹುದು.

information about uttara kannada ಇದಲ್ಲದೆ ಹಲವಾರು ಚಿಕ್ಕ ಚಿಕ್ಕ ಜಲಪಾತಗಳು ಕೂಡ ಇವೆ. ಶರಾವತಿ ಕಮರಿಯಲ್ಲಿ ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಎಂಬ ಹೆಸರಿನ ಉತ್ಪಾದನಾ ಕೇಂದ್ರವನ್ನು ೧೯೪೮ರಲ್ಲಿ ಸ್ಥಾಪನೆ ಮಾಡಲಾಗಿದೆ. ಈ ವಿದ್ಯುತ್ ಸ್ಥಾವರದಿಂದ ಸ್ವಲ್ಪ ದೂರ ಇರುವ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರವು ಇಡೀ ಏಷ್ಯಾದಲ್ಲಿ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ.

Major crops of Uttara Kannada District

about uttarakhand in kannada ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರದಿಂದ ಭಟ್ಕಳದವರಿಗೆ ನಾವು ಕರಾವಳಿ ಪ್ರದೇಶವನ್ನು ಕಾಣಬಹುದು. ಗಟ್ಟಗಳ ಕೆಳಗಿರುವ ತಾಲೂಕುಗಳೆಂದರೆ ಕಾರವಾರ ಅಂಕೋಲ ಕುಮಟಾ ಹೊನ್ನಾವರ ಭಟ್ಕಳ ತಾಲೂಕುಗಳು ಇವೆ. ಘಟ್ಟದ ಮೇಲೆ ಇರುವ ತಾಲೂಕುಗಳು ಸಿದ್ದಾಪುರ ಎಲ್ಲಾಪುರ ಶಿರಸಿ ಸುಪ ಮುಂಡಗೋಡ ಹಳಿಯಾಳ ತಾಲೂಕುಗಳಿವೆ. ಈ ಮೇಲೆ ನೀಡಿದ ಕರಾವಳಿ ತಾಲೂಕುಗಳಗಿನ ಹೆಚ್ಚಾಗಿ ತೆಂಗು ಬೆಳೆಯುವುದನ್ನು ಕಾಣಬಹುದು ಮತ್ತು ಘಟ್ಟದ ಮೇಲೆ ಇರುವ ತಾಲೂಕುಗಳಲ್ಲಿ ನಾವು ಹೆಚ್ಚಾಗಿ ಅಡಿಕೆ ಬೆಳೆಯುವುದನ್ನು ಕಾಣಬಹುದು. ಘಟ್ಟ ಪ್ರದೇಶಗಳಲ್ಲಿ ಹೆಚ್ಚು ತಂಪಾದ ಅನುಭವ ಇರುತ್ತದೆ ಮತ್ತು ಕರಾವಳಿ ಪ್ರದೇಶದಲ್ಲಿ ಸ್ವಲ್ಪ ಸಿಕ್ಕೆ ಹೆಚ್ಚು ಇರುತ್ತದೆ.

information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ ಈ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತದೆ. ಜೂನ್ ನಿಂದ ಪ್ರಾರಂಭವಾದ ಮಳೆಗಾಲವೂ ಅಕ್ಟೋಬರ್ ತಿಂಗಳ ವರೆಗೆ ಇರುತ್ತದೆ. ಈ ಪ್ರದೇಶದಲ್ಲಿ ಸರಿಸುಮಾರು ಸರಾಸರಿ 2836 mm ಮಳೆ ಸುರಿಯುತ್ತದೆ. ಕರಾವಳಿ ಪ್ರದೇಶದ ಸಿಂಹಾದ್ರಿ ಪ್ರದೇಶದಲ್ಲಿ ಹೆಚ್ಚು ಮಳೆ ಆಗುತ್ತದೆ. ಪೂರ್ವ ಭಾಗದಲ್ಲಿ ಮಳೆ ಸ್ವಲ್ಪ ಕಡಿಮೆ ಸುರಿಯುತ್ತದೆ. ಉತ್ತರ ಕನ್ನಡ ಜಿಲ್ಲೆಯ ಶೇಕಡ 80ರಷ್ಟು ಅರಣ್ಯಾವೃತ್ತ ಪ್ರದೇಶವನ್ನು ಹೊಂದಿರುತ್ತದೆ. ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣವು 815, 057 ಹೆಕ್ಟಾಟ್ಸ್ ಆಗಿರುತ್ತದೆ. ಈ ಪ್ರದೇಶಗಳಲ್ಲಿ ಹೆಚ್ಚಾಗಿ ನಂದಿ ಹೊನ್ನೇ ಮತ್ತಿ ಮುಂತಾದ ಮರಗಳನ್ನು ನಾವು ಕಾಣಬಹುದು. ಈ ಪ್ರದೇಶಗಳಲ್ಲಿ ಶ್ರೀಗಂಧದ ಮರವು ಕೂಡ ಇದೆ. ಈ ಪ್ರದೇಶಗಳಲ್ಲಿ ನಾವು ಸಾಕಷ್ಟು ಕನಿಜ ಸಂಪತ್ತನ್ನು ನೋಡಬಹುದು. ಅವುಗಳೆಂದರೆ ಕಬ್ಬಿನ ಸುಣ್ಣದ ಶಿಲೆ ಜೇಡಿ ಮಣ್ಣು ಗಾಜು ಸಾಬೂನು ಮುಂತಾದವುಗಳಾಗಿವೆ. ಸಹ್ಯಾದ್ರಿ ಪ್ರದೇಶಗಳಲ್ಲಿ ನಾವು ಹೆಚ್ಚಾಗಿ ಹಲವಾರು ಲೋಹ ನಿಕ್ಷೇಪಗಳನ್ನು ಕಾಣಬಹುದು.

ವೃತ್ತಿ ಮತ್ತು ವ್ಯಾಪಾರದ ಮಾಹಿತಿಗಳು : information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿರ್ಸಿ ಜಿಲ್ಲೆಯ ಅತಿ ದೊಡ್ಡ ವಾಣಿಜ್ಯ ಜಿಲ್ಲೆಯಾಗಿರುತ್ತದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಏಲಕ್ಕಿ ಬಾಳೆ ಅಡಿಕೆ ಕಬ್ಬು ಮತ್ತು ತೆಂಗು ಮುಂತಾದ ಮುಖ್ಯವಾದ ಬೆಳೆಗಳನ್ನು ಬೆಳೆಸುತ್ತಾರೆ. ಇವುಗಳನ್ನು ಬಿಟ್ಟರೆ ಬದನೆ ಕಲ್ಲಂಗಡಿ ಶೇಂಗ ಪಪ್ಪಾಯ ಹಲಸು ಮಾವಿನ ಹಣ್ಣು ಗೋಡಂಬಿ ಹುಣಸೇ ನಿಂಬೆಕಾಯಿಗಳನ್ನು ಕೂಡ ಬೆಳೆಯುತ್ತಾರೆ. ಈ ಪ್ರದೇಶಗಳಲ್ಲಿ ಪಶುಪಾಲನೆಯನ್ನು ಕೂಡ ಮಾಡುತ್ತಾರೆ. ಗದ್ದೆ ಪ್ರದೇಶಗಳಲ್ಲಿ ಹೆಚ್ಚಾಗಿ ನಾವು ಕಡಲೆ ತೊಗರಿ ಬೆಳೆಯುವುದನ್ನು ಕಾಣಬಹುದು ಏಲಕ್ಕಿ ಕಾಳುಮೆಣಸು ಬಾಳೆ ಗಳನ್ನು ಹೆಚ್ಚಾಗಿ ಅಡಕೆ ತೋಟದಲ್ಲಿ ಕಾಣಬಹುದು.

ಭಟ್ಕಳ ಪ್ರದೇಶದಲ್ಲಿ ಹೆಚ್ಚಾಗಿ ಮಲ್ಲಿಗೆಯನ್ನು ಬೆಳೆಸುತ್ತಾರೆ. ಈ ಪ್ರದೇಶವು ಮಲ್ಲಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿ ಬೆಳೆದ ಮಲ್ಲಿಗೆಗಳು ವಿವಿಧ ದೇಶಗಳಿಗೆ ರಫ್ತು ಕೂಡ ಆಗುತ್ತದೆ. ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ಮಾಡುವದನ್ನು ನಾವು ಕಾಣಬಹುದು. ಮೀನುಗಾರಿಕೆ ಒಂದು ಪ್ರಮುಖ ಉದ್ಯೋಗವಾಗಿದೆ ಈ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಜಾತಿಯವರು ಕೂಡ ಮೀನು ಉದ್ಯಮದಲ್ಲಿ ಇದ್ದಾರೆ. ಭಟ್ಕಳ ಗಂಗಾವಳಿ ಕಾರವಾರ ಕುಮಟಾ ಮುರುಡೇಶ್ವರ ಶಿರಾಲಿ ಮಂಕಿ ಹೊಲನಗದ್ದೆ ಮುಂತಾದ ಪ್ರದೇಶಗಳು ಮೀನು ಹಿಡಿಯುವ ಪ್ರಮುಖ ಕೇಂದ್ರಗಳಾಗಿವೆ.

ಇಲ್ಲಿನ ಜನರು ಹೆಚ್ಚಾಗಿ ಚರ್ಮದ ಉದ್ಯೋಗ ರೇಷ್ಮೆ ಉದ್ಯೋಗ ಚಿನ್ನ ಬೆಳ್ಳಿಯ ಉದ್ಯೋಗ ಕೆತ್ತನೆಯ ಉದ್ಯೋಗ ವಾಹನ ದುರಸ್ತಿ ಮೇಣದಬತ್ತಿ ಉತ್ಪಾದನೆ ಕಾರ್ಖಾನೆ ಮುಂತಾದ ಪ್ರದೇಶಗಳಲ್ಲಿ ಹೆಚ್ಚಾಗಿ ಜನರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಾಂಡೇಲಿ ಎಂಬ ಪ್ರದೇಶದಲ್ಲಿ ನಾವು ಕಾಗದ ಉತ್ಪಾದನೆಯ ದೊಡ್ಡ ಕಾರ್ಖಾನೆಯನ್ನು ನಾವು ಕಾಣಬಹುದು. ಈ ಪ್ರದೇಶಗಳಲ್ಲಿ ಕಾರವಾರ ಕುಮಟಾ ಹೊನ್ನಾವರ ಭಟ್ಕಳ ಬೆಲೆಕೇರಿ ತದಡಿ ಇವುಗಳು ಈ ಜಿಲ್ಲೆಯ ಪ್ರಮುಖ ಬಂದರುಗಳು ಆಗಿವೆ.

ಜನಸಂಖ್ಯೆ ವಿವರಗಳು : information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ

ಈ ಹಿಂದೆ ನಡೆದ ಜನ ಗತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 13,53,64 ಜನರಿದ್ದಾರೆ ಇವತ್ತು ಜನಸಂಖ್ಯೆಯಲ್ಲಿ ಗಂಡಸರ ಸಂಖ್ಯೆಯು ನಾಲ್ಕು ಲಕ್ಷದ 89,908 ಆಗಿದೆ ಮತ್ತು ಮಹಿಳೆಯರ ಸಂಖ್ಯೆಯು ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರದ 823 ಆಗಿದೆ. ಸುಮಾರು 9,65,731 ಜನರು ಹಳ್ಳಿ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಒಟ್ಟು ಜನಸಂಖ್ಯೆಯಲ್ಲಿ 83.6 ಹಿಂದೂ ಜನಸಂಖ್ಯೆ 11.9 ಮುಸ್ಲಿಮರು ಮತ್ತು 3.3 ಕ್ರೈಸ್ತ ಜನ ಸಂಖ್ಯೆ ಇದೆ. ಈ ಪ್ರದೇಶದಲ್ಲಿ ಬಹು ಸಂಖ್ಯಾತರ ಹಿಂದೂಗಳು ಆಗಿದ್ದಾರೆ. ಈ ಪ್ರದೇಶದಲ್ಲಿ ಜೈನ ಮತ್ತು ಬೌದ್ಧ ಧರ್ಮಗಳು ಕೂಡ ಪ್ರಚಾರದಲ್ಲಿ ಇದ್ದು. ಈ ಪ್ರದೇಶಗಳಲ್ಲಿ ವೀರಶೈವ ಪಂತದ ಪ್ರಚಾರವು 16 ರಿಂದ 18ನೇ ಶತಮಾನದವರೆಗೆ ಇತ್ತು. ಈ ಪ್ರದೇಶಗಳಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಹಲವಾರು ನೂರಾರು ದೇವಾಲಯಗಳನ್ನು ನಾವು ಕಾಣಬಹುದು.

ಶಿಕ್ಷಣ ಮಾಹಿತಿಗಳು : Education details 

ಜಿಲ್ಲೆಯ ಒಟ್ಟು ಸಾಕ್ಷರತಾ ಪ್ರಮಾಣವು 84.64 ಆಗಿರುತ್ತದೆ. ಇದರಲ್ಲಿ ಪುರುಷರ ಶೇಕಡವು 89.63 ಮತ್ತು ಮಹಿಳೆಯರ ಶೇಕಡ 78.39 ಆಗಿದೆ. ಹಿಂದಿನ ಕಾಲದಲ್ಲಿ ಪ್ರದೇಶದಲ್ಲಿ ಬ್ರಾಹ್ಮಣ ಜೈನ ಮತ್ತು ವೀರಶೈವ ಸಂಪ್ರದಾಯಗಳ ಪಾಠಶಾಲೆಗಳು ಅಸ್ತಿತ್ವದಲ್ಲಿ ಇತ್ತು ನಂತರ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಇವುಗಳೆಲ್ಲವೂ ಕೊನೆಯದವು.

ಪ್ರಮುಖ ಶಾಲೆಗಳ ವಿವರಗಳು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಡಕೇರಿ ಸರಕಾರಿ ಪ್ರೌಢಶಾಲೆ ನಾನಿಘಟ್ಟ ಸಿದ್ಧಿ ವಿನಾಯಕ ಪ್ರೌಢಶಾಲೆ ಸರಕಾರಿ ಪದವಿ ಕಾಲೇಜು ಸರಕಾರಿ ಪಾಲಿಟೆಕ್ನಿಕ್ ಧನ್ವಂತರಿ ಆರ್ಯುವೇದ ವೈದ್ಯಕೀಯ ಕಾಲೇಜು ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಾಪುರ ಬಲಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಶಾಂತಿ ಗುರುಕುಲ ವಿದ್ಯ ಕೇಂದ್ರ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಮುಂತಾದವುಗಳು ಆಗಿವೆ.

ಕಲೆ ಮತ್ತು ಸಂಸ್ಕೃತಿ ಮಾಹಿತಿ : Culture of uttara Kannada 

information about uttara kannada ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಭಾಷೆ ಮಾತನಾಡುವ ಜನರನ್ನು ನಾವು ಕಾಣಬಹುದು. ಈ ಜಿಲ್ಲೆಯು ಹಲವಾರು ಜನಪದ ಸಂಸ್ಕೃತಿಯ ಬಿಡು ಆಗಿರುತ್ತದೆ. ಈ ಪ್ರದೇಶದಲ್ಲಿ ನಾವು ಯಕ್ಷಗಾನವನ್ನು ವಿಶಿಷ್ಟ ಸ್ಥಾನದಲ್ಲಿ ನೋಡಬಹುದಾಗಿದೆ. ಇಲ್ಲಿ ಯಕ್ಷಗಾನದಲ್ಲಿ ವಿಶಿಷ್ಟ ಸ್ಥಾನ ಪಡೆದವರು ಕೆರೆಮನೆ ಶಿವರಾಮ ಹೆಗಡೆ ಕೆರೆಮಣೆ ಮಹಾಬಲ ಹೆಗಡೆ ಕೆರಮಣ ಶಂಬು ಹೆಗಡೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಗೋಡಿನಾರಾಯಣ ಹೆಗಡೆ ಮುಂತಾದ ಕಲಾವಿದರು ಆಗಿದ್ದಾರೆ.information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ ಇವುಗಳಲ್ಲಿ ಪ್ರಮುಖ ಸಾಧನೆ ಮಾಡಿದ ರಾಮಚಂದ್ರ ಹೆಗಡೆಯವರಿಗೆ 2014 ರಲ್ಲಿ ಜಾನಪದ ಶ್ರೀ ಪ್ರಶಸ್ತಿ ಕೂಡ ದೊರೆತಿರುತ್ತದೆ ಈ ಪ್ರದೇಶಗಳಲ್ಲಿ ನಾವು ಹೆಚ್ಚಾಗಿ ನಾಟಕಗಳನ್ನು ಕೂಡ ನೋಡಬಹುದಾಗಿದೆ. ಹಲವಾರು ತಾಳೆ ಮದ್ದಲೆ ಕಲಾವಿದರು ನಾಟಕ ಕಲಾವಿದರನ್ನು ನಾವು ಕಾಣಬಹುದು. ಇದರ ಜೊತೆಗೆ ನಾವು ಸುಗ್ಗಿ ಕುಣಿತ ಜನಪದ ಗೀತೆಗಳು ಬೆಸ್ತರ ಪದ ಸಿದ್ಧಿಯರ ಕುಣಿತ ಮುಂತಾದ ಜಾನಪದ ಸಂಸ್ಕೃತಿಯನ್ನು ಕೂಡ ನಾವು ಕಾಣಬಹುದಾಗಿದೆ.

ಹಿಂದೂ ಧರ್ಮದ ಇತಿಹಾಸ | hindu religion history in kannada

ಪ್ರಮುಖ ಪ್ರೇಕ್ಷಣೀಯ ಸ್ಥಳಗಳು : Best tourist places 

information about uttara kannada ಈ ಪ್ರದೇಶದಲ್ಲಿ ನಾವು ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಈ ಪ್ರದೇಶದಲ್ಲಿ ಹಲವಾರು ದೇವಾಲಯಗಳನ್ನು ಕೂಡ ನಾವು ಕಾಣಬಹುದು. ಅವುಗಳಲ್ಲಿ ಪ್ರಮುಖ ದೇವಾಲಯ ಎಂದರೆ ಮಾರಿಕಾಂಬ ದೇವಾಲಯ ಆಗಿದೆ. ಈ ದೇವಾಲಯದಲ್ಲಿ ಎರಡು ವರ್ಷಕ್ಕೊಮ್ಮೆ ಸಿರಸಿ ಮಾರಿ ಕಂಬ ಜಾತ್ರೆ ನಡೆಯುತ್ತದೆ. ಈ ಪ್ರದೇಶಗಳಲ್ಲಿ ನಾವು ಅತ್ಯಂತ ಸುಂದರವಾದ ಪ್ರಾಕೃತಿಕ ಸೌಂದರ್ಯಗಳನ್ನು ಕೂಡ ನಾವು ಕಾಣಬಹುದು. ಹಲವಾರು ಜಲಪಾತಗಳನ್ನು ಕಾಣಬಹುದು ಇಲ್ಲಿರುವ ಪ್ರಮುಖ ರಮಣೀಯ ಸ್ಥಳಗಳು ಎಂದರೆ ಬನರಾಸಿ ಸಹಸ್ರಲಿಂಗ ಸೋಂದ ಮಠ ದೇವಿ ಮನೆ ಮುಂತಾದವಾಗಿದೆ.

ನಾವು ಈ ಪ್ರದೇಶದಲ್ಲಿ ಉಂಚಳ್ಳಿ ಜಲಪಾತವನ್ನು ಕಾಣಬಹುದು. ಈ ಜಲಪಾತವೂ 116 ಮೀಟರ್ ಎತ್ತರದಿಂದ ಧುಮುಕುವ ಸುಂದರವಾದ ದೃಶ್ಯವನ್ನು ನಾವಿಲ್ಲಿ ಕಾಣಬಹುದು. information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ ಈ ಜಲಪಾತವು ಶಿರಸಿ ನಗರದಿಂದ 45km ದೂರದಲ್ಲಿದೆ. ನಂತರ ಬನವಾಸಿ ಮಧುಕೇಶವ ದೇವಾಲಯ ಅಪ್ಸರಕೊಂಡ ಪ್ರದೇಶ ಮಾಗೋಡು ಜಲಪಾತ ಉಂಚಳ್ಳಿ ಜಲಪಾತ ಯಾಣದಾಶಿಕಾರ ದೇವಾಲಯ ಜಗತ್ಪ್ರಸಿದ್ಧಿ ಮುರುಡೇಶ್ವರ ದೇವಾಲಯ ಗೋಕರ್ಣ ದೇವಾಲಯ ಕರಾವಳಿ ಸಮುದ್ರ ತೀರ ಮುಂತಾದ ಹಲವಾರು ಪ್ರವಾಸಿ ತಾಣಗಳನ್ನು ನಾವು ಕಾಣಬಹುದು.

ತಾಲೂಕುಗಳ ವಿವರಗಳು : about uttara kannada district

  1. ಭಟ್ಕಳ
  2. ಹೊನ್ನಾವರ
  3. ಅಂಕೋಲ
  4. ಕಾರವಾರ
  5. ಸಿದ್ದಾಪುರ
  6. ಸಿರ್ಸಿ
  7. ಯಲ್ಲಾಪುರ
  8. ದಾಂಡೇಲಿ
  9. ಮುಂಡಗೋಡು
  10. ಜೊಯಿಡಾ
  11. ಹಳಿಯಾಳ

ಪ್ರಮುಖ ವ್ಯಕ್ತಿಗಳು : information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ

ಯಕ್ಷಗಾನ ವಿಭಾಗದಲ್ಲಿ ಅತ್ಯುತ್ತಮ ಹೆಸರನ್ನು ಪಡೆದವರ ಹೆಸರುಗಳು ಮಹಾಬಲ ಹೆಗಡೆ ತೋಟಿಮನೆ ಗಣಪತಿ ಹೆಗ್ಗಡೆ ರಾಮಚಂದ್ರ ಹೆಗಡೆ ಶಂಭೂ ಹೆಗಡೆ ಮುಂತಾದವರು ಆಗಿರುತ್ತಾರೆ.

ಈ ಜಿಲ್ಲೆಯ ಪ್ರಮುಖ ಸಾಹಿತಿಗಳ ಹೆಸರುಗಳು ಅಶೋಕ ಹೆಗಡೆ ಆರ್ ವಿ ಭಂಡಾರಿ ದಿನಾಚರಣೆ ಗೌರೀಶ ಕಾಯ್ಕಿಣಿ ಸುನಂದ ಕಡಮೆ ಶ್ರೀಧರ ಬಳೆಗಾರ ಸಂದೀಪ ನಾಯಕ ಆರ್ ಎನ್ ನಾಯಕ ಪಿಆರ್ ನಾಯಕ್ ಶರೀಫ್ ಭಟ್ಕಳ ವಸುಶ್ರೀ ಹಳೆಮನೆ ಸುಧಾ ಶರ್ಮ ಚವತ್ತಿ ಅರವಿಂದ ಕರ್ಕಿ ಕೋಡಿ ಜಿ ಎಚ್ ನಾಯಕ ಜಿಎಸ್ ಅವಧಾನಿ ಗೀತಾ ವಸಂತ ಗೀತಾ ವಸಂತ ಶ್ರೀಮತಿ ರೇಶ್ಮ ಉಮೇಶ ಭಟ್ಕಳ ಸಚ್ಚಿದಾನಂದ ಹೆಗಡೆ ಹೊನ್ನಾವರ ಜಯಂತ ಕಾಯ್ಕಿಣಿ ಮುಂತಾದವರು ಆಗಿರುತ್ತಾರೆ. information about uttara kannada ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಹೆಸರುಗಳು ರಾಮಕೃಷ್ಣ ಹೆಗಡೆ ಅನಂತ್ ಕುಮಾರ್ ಹೆಗಡೆ ದೇಶಪಾಂಡೆ ಗಣೇಶ ಹೆಗಡೆ ವಿಶ್ವೇಶ್ವರ ಹೆಗಡೆ ಕಾಗೆರಿ ಕೆಎಂ ನಾಯಕ್ ಅರ ಬಯಲು ಶಿವರಾಮ ಹೆಬ್ಬಾರ ಶಿವಾನಂದ ಮುಂತಾದವರು ಆಗಿರುತ್ತಾರೆ. information about uttara kannada ಜಿಲ್ಲೆಯಲ್ಲಿರುವ ಪ್ರಮುಖ ಪತ್ರಕರ್ತರ ಹೆಸರುಗಳು ಪರಮೇಶ್ವರ್ ಗುನುಕಲ್ ರವಿ ಹೆಗಡೆ ಮಹಾಬಲ ಸೀತಾಳ ಬಾವಿ ತಿಮ್ಮಪ್ಪ ಮುಂತಾದವರು ಜಿಲ್ಲೆಯಲ್ಲಿರುವ ಪ್ರಮುಖ ಪತ್ರಕರ್ತ ರಾಗಿರುತ್ತಾರೆ.

ಜಿಲ್ಲೆಯಲ್ಲಿರುವ ಪ್ರಮುಖ ಟಿ.ವಿ ಮತ್ತು ದಿನಪತ್ರಿಕೆಗಳ ವಿವರಗಳು : 

information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ ಪ್ರಮುಖ ದಿನಪತ್ರಿಕೆಗಳು ಲೋಕ ಧ್ವನಿ ಕರಾವಳಿ ಮುಂಜಾವು ನುಡಿ ಜೇನು ಮುಂತಾದವುಗಳಾಗಿವೆ ಮತ್ತು ಪ್ರಮುಖ ಟಿ ವಿ ಮಾಧ್ಯಮಗಳು ವಿಸ್ಮಯ ಟಿವಿ ಶ್ರೀ ಮಾರಿಕಾಂಬ ಮುಂತಾದವುಗಳು ಟಿವಿ ಮಾಧ್ಯಮಗಳಾಗಿವೆ.

Conclusion : information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ

ಈ ಲೇಖನದಲ್ಲಿ ನಾವು ಉತ್ತರ  ಜಿಲ್ಲೆಯ ಸಂಪೂರ್ಣ ಮಾಹಿತಿ ಕಲ್ಲೇ ಸಂಸ್ಕೃತಿ ಉದ್ಯೋಗಗಳು ಶಿಕ್ಷಣ ಪ್ರವಾಸಿ ತಾಣಗಳು ಇತಿಹಾಸ ಮುಂತಾದ ಮಾಹಿತಿಗಳನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಂಥ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.

More information

Leave a Comment