Nandi hills ಇತಿಹಾಸಕಾರರು ಹೇಳುವ ಪ್ರಕಾರ, ಚೋಳ ರಾಜವಂಶದ ಆಡಳಿತದ ಅವಧಿಯಲ್ಲಿ ನಂದಿ ಬೆಟ್ಟಗಳು ಆನಂದಗಿರಿ ಎಂದು ಪ್ರಸಿದ್ಧಿ ಆಗಿದ್ದವು. ಮರಾಠಾ ಆಡಳಿತಗಾರರ ಅನೇಕ ಕೋಟೆಗಳು ಇಲ್ಲಿ ಇವೆ. ಆದರೆ ಟಿಪ್ಪು ಸುಲ್ತಾನ್ (ನಂದಿ ಬೆಟ್ಟ) Nandi hills ಕೋಟೆಯನ್ನು ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತದೆ. ಈ ಕೋಟೆಯ ಖ್ಯಾತಿ ಎಲ್ಲೆಡೆ ಇದೆ. ಟಿಪ್ಪು ಸುಲ್ತಾನ್ ನಂದಿ ಬೆಟ್ಟದ ಬಳಿಯ ದೇವನಹಳ್ಳಿ ಯ ಕೋಟೆಯಲ್ಲಿ ಜನಿಸಿದನು ಎಂದು ಹೇಳುತ್ತಾರೆ. ಬೇಸಿಗೆ ಸಮಯದಲ್ಲಿ ಟಿಪ್ಪುಸುಲ್ತಾನ್ ಈ ನಂದಿ ದುರ್ಗ್‌ನಲ್ಲಿ ನಂದಿ ಬೆಟ್ಟದಲ್ಲಿ ಸಮಯ ಕಳೆಯುತ್ತಿದ್ದನು. ಈ ಸ್ಥಳವನ್ನು ತಾಷ್ಕ್-ಎ-ಜನ್ನತ್ ಎಂದು ಕೂಡಾ ಕರೆಯುತ್ತಾರೆ. ನಂದೇಶ್ವರ ಅಭಯಾರಣ್ಯವು ಪರ್ವತಗಳ ಇಳಿಜಾರಿನಲ್ಲಿ ಇಲ್ಲಿಯೇ ಹತ್ತಿರದಲ್ಲಿ ಇದೆ.
ನಂದಿ ಹಿಲ್ಸ್ ಟೈಮಿಂಗ್ಸ್ -Nandi hills timings :
Table of Contents
ನಂದಿ ಬೆಟ್ಟ Nandi hills ತೆರೆಯುವ ಮತ್ತು ಮುಚ್ಚುವ ಸಮಯ ಇಲ್ಲಿದೆ, ನಂದಿ ಬೆಟ್ಟ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಜನರಿಗೆ ವೀಕ್ಷಣೆಗೆ ಅವಕಾಶ ಇರುತ್ತದೆ. ಆದರೆ ನೀವು ಹೆಚ್ಚು ಮೋಜು ಮಾಡಲು ಬಯಸಿದರೆ ಸೂರ್ಯಾಸ್ತದ ಸಮಯದಲ್ಲಿ ಸಂಜೆ 6 ಗಂಟೆ ನಂತರ ಬಂದರೆ ನಿಮಗೆ ಒಳ್ಳೆಯದು. ನೀವು ನಂದಿ ಬೆಟ್ಟ ಅನ್ನು ಸರಿಯಾಗಿ ಆನಂದಿಸಲು ಕನಿಷ್ಠ 2 ಗಂಟೆ ನಿಮಗೆ ಬೇಕಾಗುತ್ತದೆ. ಈ ಸ್ಥಳವು ಪ್ರತಿದಿನ ತೆರೆದಿರುತ್ತದೆ ಆದರೆ ಸಾರ್ವಜನಿಕ ರಜಾದಿನಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ ನೆನಪಿನಲ್ಲಿಡಿ.
ನಂದಿ ಬೆಟ್ಟದ ಸೌಂದರ್ಯ
ಫೋಟೋ ತೆಗೆಯುವವರಿಗೆ ನಂದಿ ಬೆಟ್ಟವು ಉತ್ತಮ ಸ್ಥಳ ಆಗಿದೆ. ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗ ಆಗಿದೆ. ಇಲ್ಲಿ ನೀವು ಅನೇಕ ರೀತಿಯ ಹೂವುಗಳು ಮತ್ತು ಸಸ್ಯಗಳನ್ನು ನೋಡಬಹುದು. ಇದಲ್ಲದೆ ನೀವು ಅನೇಕ ಜಾತಿಯ ಕಾಡು ಪ್ರಾಣಿಗಳನ್ನು ನೋಡಬಹುದು. ಅನೇಕ ಬಗೆಯ ಅಪರೂಪದ ಹೂವುಗಳು ಮತ್ತು ಗಿಡಮೂಲಿಕೆಗಳು ಇಲ್ಲಿ ಇದೆ. ನಂದಿ ಬೆಟ್ಟಗಳ ಪರ್ವತದ ತಂಪಾದ ಗಾಳಿ ಸುಂದರ ವಾತಾವರಣವು ಇಲ್ಲಿ ಬರುವ ಪ್ರವಾಸಿಗರನ್ನು ಮಂತ್ರ ಮುಗ್ಧ ಗೊಳಿಸುತ್ತದೆ. ಈ ಜಾಗಕ್ಕೆ ಮೊದಲು ಆನಂದ ಗಿರಿ ಎಂದು ಕರೆಯುತ್ತಿದ್ದರು ಅನಂದ ಗಿರಿ ಎಂದರೆ ಸಂತೋಷದ ಪರ್ವತ ಎಂದು ಅರ್ಥ ಆಗಿದೆ.
ಪ್ರಸಿದ್ಧ ಹಂಪಿ ಇತಿಹಾಸ | hampi history in kannada
ನಂದಿ ಬೆಟ್ಟದ ಪ್ರವೇಶ ಶುಲ್ಕ -Nandi Hills Entry Fees :
2019 ಕಿಂತ ಮೊದಲು ನಂದಿ ಬೆಟ್ಟ Nandi hills ಪ್ರವೇಶ ಮಾಡಲು 10 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಆದರೆ 2019 ಕಿಂತ ನಂತರ 20 ರೂಪಾಯಿ ಗೆ ಹೆಚ್ಚಿಸಿದರು. ನೀವು ನಾಲ್ಕು ಚಕ್ರದ ವಾಹನ ತಂದರೆ ಪಾರ್ಕ್ ಮಾಡಲು 60 R. s ಕೊಡಬೇಕಾಗುತ್ತದೆ.
ನಂದಿ ಬೆಟ್ಟಗಳಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳು :
ಚನ್ನಪುರ ಜಲಪಾತ – Channapura Falls :
ನಂದಿ ಬೆಟ್ಟಗಳ ಆಕರ್ಷಣೆಯಲ್ಲಿ ಚನ್ನಪುರ ಜಲಪಾತ ಬಹಳ ಸುಂದರ ಮತ್ತು ಆಕರ್ಷಣೀಯ ಜಾಗಗಳಲ್ಲಿ ಒಂದು. ಇದು ನೋಡು ತುಂಬಾ ಸುಂದರ ಆಗಿದೆ. ಇಲ್ಲಿನ ಸುಂದರ ವೀಕ್ಷಣೆ ನೋಡಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದು ಇನ್ನೂ ಅದ್ಭುತ ಅನುಭವ.
ನೆಹರೂ ನಿಲಯ – Nehru Nilaya :
ನೆಹರು ನಿಲಯ ಎಂಬುದು ಐತಿಹಾಸಿಕ ಮತ್ತು ಪ್ರಾಚೀನ ಕಟ್ಟಡ. ಈ ಭವ್ಯವಾದ ಕಟ್ಟಡವನ್ನು ಬ್ರಿಟೀಷ್ ಕಾಲದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಕಟ್ಟಡವು ಸರ್ ಮಾರ್ಕ್ ಕಬ್ಬನ್ ಅವರ ಮನೆ ಆಗಿತ್ತು ಎಂದು ಹೇಳುತ್ತಾರೆ. ಇದನ್ನು 1834 ಇಸವಿಯಲ್ಲಿ ಕಟ್ಟಲಾಯಿತು. ಈಗ ಇದನ್ನು ತೋಟಗಾರಿಕೆ ಇಲಾಖೆಯು ಅತಿಥಿಗೃಹವನ್ನಾಗಿ ಪರಿವರ್ತಿಸಿದೆ.
ಮುದ್ದೇನಹಳ್ಳಿ ವಸ್ತುಸಂಗ್ರಹಾಲಯ -Muddenahalli Museum :
ಮುದೇನಹಳ್ಳಿ ವಸ್ತುಸಂಗ್ರಹಾಲಯವು ನಂದಿ ಬೆಟ್ಟಕ್ಕೆ Nandi hills ಹೋಗುವಾಗ ನೋಡ ಬೇಕಾದ ಸ್ಥಳವಾಗಿದೆ. ಈ ಸ್ಥಳವು ನಗರದಿಂದ 7 ಕಿ.ಮೀ ದೂರ ದಲ್ಲಿ ಇದೆ. ಈ ಸ್ಥಳವು ಈ ಗ್ರಾಮದ ಪ್ರಮುಖ ಕೇಂದ್ರದಲ್ಲಿ ಒಂದು ಆಗಿದೆ.
ಬ್ರಹ್ಮ ಆಶ್ರಮ ಗುಹೆ – Brahm Ashram Cave :
ಬ್ರಹ್ಮ ಆಶ್ರಮ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು ಆಗಿದೆ. ಬ್ರಹ್ಮಶ್ರಮ ಗುಹೆಯ ಹಚ್ಚ ಹಸಿರಿನಿಂದ ಕೂಡಿದ್ದು ಇಲ್ಲಿ ಬರುವ ಪ್ರವಾಸಿಗರನ್ನು ಇಲ್ಲಿನ ಹಚ್ಚ ಹಸಿರು ಪ್ರವಾಸಿಗರನ್ನು ಮಂತ್ರ ಮುಗ್ದ ಗೊಳಿಸುತ್ತದೆ. ನೀವು ಖಂಡಿತವಾಗಿಯೂ ಈ ಸ್ಥಳವನ್ನು ನೋಡಲು ಬರಬಹುದು. ಜಾನಪದ ನಂಬಿಕೆಯ ಆಧಾರದ ಮೇಲೆ, ರಾಮಕೃಷ್ಣ ಪರಾಮಹಂಸರು ಈ ಸ್ಥಳದಲ್ಲಿ ಸ್ವಲ್ಪ ಸಮಯ ಕಳೆದ್ದಿದ್ದರು ಎಂದು ಹೇಳುತ್ತಾರೆ.
ಟಿಪ್ಪು ಸುಲ್ತಾನ್ ಕೋಟೆ -Tipu Sultan Fort :
ಟಿಪ್ಪು ಸುಲ್ತಾನ್ ಕೋಟೆ ನಂದಿ ಬೆಟ್ಟಗಳ Nandi hills ಪ್ರಸಿದ್ಧ ಪ್ರವಾಸಿ ತಾಣ ಆಗಿರುತ್ತದೆ. ಈ ಕೋಟೆಯ ಕೆಲಸವನ್ನು ಟಿಪ್ಪು ಸುಲ್ತಾನ್ ಅವರ ತಂದೆ ಹೈದರ್ ಅಲಿ ಖಾನ್ ಪ್ರಾರಂಭ ಮಾಡಿದ್ದನು ನಂತರ ಅವನ ಮಗ ಟಿಪ್ಪುಸುಲ್ತಾನ ಈ ಕೆಲಸವನ್ನು ಪೂರ್ಣ ಮಾಡಿದನು. ಬೇಸಿಗೆಯಲ್ಲಿ ಸಮಯವನ್ನು ಕಳೆಯಲು ಈ ಕೋಟೆಯನ್ನು ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತದೆ. ಈ ಕೋಟೆಗೆ ತಶಕ್-ಎ-ಜನ್ನತ್ ಎನ್ನುವ ಹೆಸರನ್ನು ಇಟ್ಟನು. ಈ ಕೋಟೆಯ ಕೆತ್ತನೆಗಳು ಇಲ್ಲಿಗೆ ಬರುವ ಪ್ರವಾಸಿಗರನ್ನು ಸೆಳೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಓದಿ . https://www.karnatakatourism.org/tour-item/nandi-hills/